ಅಕ್ಷರ ದಾಸೋಹ ವಿಭಾಗ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅಕ್ಷರ ದಾಸೋಹ ವಿಭಾಗ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಜುಲೈ 27, 2020

ಅಕ್ಷರ ದಾಸೋಹ ವಿಭಾಗ






ಅಕ್ಷರ ದಾಸೋಹದ ಅಡುಗೆ ತಯಾರಿಕೆ ಸಾದಿಲ್ವಾರು ಹೆಚ್ಚಳ ಬಗ್ಗೆ ಆದೇಶ ದಿನಾಂಕ 28:11:2019


🔴 *DBT , SATS ಮತ್ತು ಇತರ ದಾಖಲೆಗಳ ಕುರಿತಾದ ಪ್ರಶ್ನೆಗಳು? ಮತ್ತು ಉತ್ತರಗಳು* 🔴


👉 *ಪ್ರಶ್ನೆ: 1 ಮಗುವಿನ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣ ಪತ್ರದಲ್ಲಿ ಹೆಸರು ವ್ಯತ್ಯಾಸವಿದ್ದಲ್ಲಿ ಶಾಲಾ ದಾಖಲಾತಿಯಲ್ಲಿ ಯಾವುದನ್ನು ನಮೂದು ಮಾಡಬೇಕು?*

➡️ಪೋಷಕರನ್ನು ಕರೆಸಿ ಅವರಲ್ಲಿ 2 ದಾಖಲೆಗಳು ಪೈಕಿ ಯಾವ ದಾಖಲೆ ಸರಿ ಇದೆ ಎಂದು ಕೇಳಿ ದಾಖಲು ಮಾಡುವುದು.‌ ಸರಿ ಇಲ್ಲದ ದಾಖಲೆಯನ್ನು ತಿದ್ದುಪಡಿ ಮಾಡಿ ತರುವಂತೆ ಸೂಚಿಸಿ. ಪೋಷಕರ ಸಭೆಯಲ್ಲಿ ಮಕ್ಕಳ ಶಾಲಾ ದಾಖಲಾತಿ ಮಾಹಿತಿ, ಜನನ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್ ದಾಖಲೆ ಒಂದೇ ರೀತಿ ಇರುವಂತೆ ಮಾರ್ಗದರ್ಶನ ಮಾಡಿ.


👉 *ಪ್ರಶ್ನೆ: 2 ಪ್ರಸ್ತುತ 1 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಗುವಿನ ದಾಖಲಾತಿ ಪುಸ್ತಕದಲ್ಲಿ ತಿದ್ದುಪಡಿ ಮಾಡುವುದು ಹೇಗೆ?*

➡️ ಪೋಷಕರ ಬದಲಾಗಬೇಕಾದ ಮಾಹಿತಿ ಬಗ್ಗೆ‌ ನೋಟರಿ ಮೂಲಕ ಮುಖ್ಯ ಶಿಕ್ಷಕರಿಗೆ ಮನವಿ ಸಲ್ಲಿಸಬೇಕು ಹಾಗೂ ಪೂರಕವಾಗಿ ಸರಿ ಇರುವ ಆಧಾರ್ ಕಾರ್ಡ್ ಅಥವಾ ಜನನ ಪ್ರಮಾಣ ಪತ್ರ ಪ್ರತಿಯನ್ನು ನೀಡಬೇಕು. ಇದನ್ನು ಪಡೆದ ಮುಖ್ಯ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ‌ ತಿದ್ದುಪಡಿ ಅನುಮತಿ ನೀಡುವಂತೆ ಕೋರಿಕೆ ಸಲ್ಲಿಸಬೇಕು. ಕೋರಿಕೆ‌ ಸಲ್ಲಿಸುವಾಗ 1ನೇ ತರಗತಿಯಿಂದ ಪ್ರಸ್ತುತ ಮಗು ವ್ಯಾಸಂಗ ಮಾಡುತ್ತಿರುವ ತರಗತಿಯವರೆಗೆ ದಾಖಲೆ ಬದಲಾವಣೆ ಮಾಡಲು ಕೋರಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮತಿ ಪಡೆದ ನಂತರ ದಾಖಲಾತಿ ವಹಿ ಹಾಗೂ ಇತರ ವಹಿಗಳನ್ನು ತಿದ್ದುಪಡಿ ಮಾಡಬೇಕು. ಹಾಗೂ ದಾಖಲಾತಿ ವಹಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ‌ ಸಹಿಯನ್ನು ಪಡೆಯಬೇಕು.


👉 *ಪ್ರಶ್ನೆ : 3 ವಿದ್ಯಾಭ್ಯಾಸ ಪೂರ್ಣ ಗೊಳಿಸಿದ ವಿದ್ಯಾರ್ಥಿಗಳು ಅಗತ್ಯ ತಿದ್ದುಪಡಿಯನ್ನು ಮಾಡಲು ಏನು ಕ್ರಮ ಕೈಗೊಳ್ಳಬೇಕು?*

➡️ಪ್ರಸ್ತುತ 1-10ನೇ ತರಗತಿಯಲ್ಲಿ ವ್ಯಾಸಂಗ ಮಾಡದ ಈಗಾಗಲೇ ವಿದ್ಯಾಭ್ಯಾಸ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಅಥವಾ ಸಾರ್ವಜನಿಕರಾಗಿದ್ದಲ್ಲಿ ಅಗತ್ಯ ತಿದ್ದುಪಡಿಗೆ ನ್ಯಾಯಾಲಯದಿಂದ ಡಿಕ್ರಿ ಮಾಡಿಸಿ ಶಾಲೆಗೆ‌ ನೀಡಬೇಕು. ಹಾಗೂ ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮತಿ ‌ಮುಖ್ಯ ಶಿಕ್ಷಕರು ಪಡೆಯಬೇಕು.


👉 *ಪ್ರಶ್ನೆ: 4 ಉದಾ: ಪ್ರಸ್ತುತ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯು ದಾಖಲೆ ತಿದ್ದುಪಡಿಗೆ‌ ಯಾರಿಗೆ ಅರ್ಜಿ ಸಲ್ಲಿಸಬೇಕು?*

➡️1ನೇ ತರಗತಿಗೆ‌ ದಾಖಲಾದ ಶಾಲೆಯ ಮುಖ್ಯ ಶಿಕ್ಷಕರಿಗೆ‌ ಸಲ್ಲಿಸಬೇಕು. ತಿದ್ದುಪಡಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮತಿ ಪಡೆಯುವಾಗ 1 ರಿಂದ 9ನೇ ತರಗತಿ ಎಂದು ನಮೂದು ಮಾಡಿ ಅನುಮತಿ ಪತ್ರದ ಪ್ರತಿಯನ್ನು ಮಗು ವ್ಯಾಸಂಗ ಮಾಡಿದ ಎಲ್ಲಾ‌ ಶಾಲೆಗಳಿಗೂ ನೀಡಿ ಮಾಹಿತಿಯನ್ನು ಬದಲಾಯಿಸಿಕೊಳ್ಳಬೇಕು.


👉 *ಪ್ರಶ್ನೆ : 5 ಶಾಲಾ ದಾಖಲಾತಿಯಲ್ಲಿ ಮಗುವಿನ ಹೆಸರು ಸರಿಯಿದ್ದು SATS ನಲ್ಲಿ ತಪ್ಪಿದ್ದರೆ ಸರಿಪಡಿಸುವುದು ಹೇಗೆ?*

➡️Update student detail ನಲ್ಲಿ ಮಗುವಿನ ಹೆಸರು, ತಂದೆಯ ಹೆಸರು, ತಾಯಿಯ ಹೆಸರು ‌ಮತ್ತು ಜನನ ದಿನಾಂಕದ 50% ತಿದ್ದುಪಡಿ ಮಾಡಲು ಅವಕಾಶವಿದೆ. ಇದು ಸಾಧ್ಯವಾಗದಿದ್ದರೆ DDPI ಲಾಗಿನ್ ಸಂಪರ್ಕಿಸಿ ಎಂಬ ಸಂದೇಶ ಬಂದರೆ SATS HELP ನಲ್ಲಿ ದೂರು ದಾಖಲಿಸಬೇಕು. ದೂರು ದಾಖಲಿಸುವಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ‌ ಮನವಿ ಪತ್ರ ಮತ್ತು ಗುರುತಿನ ದಾಖಲೆ ಅಪ್ಲೋಡ್ ಮಾಡಬೇಕು. ದೂರು ದಾಖಲಿಸಿದ ನಂತರ ಅದನ್ನು ತಾಲೂಕು ‌ಹಂತಕ್ಕೆ ಫಾರ್ವರ್ಡ್ ಮಾಡಬೇಕು.


👉 *ಪ್ರಶ್ನೆ : 6 ಮಗುವಿನ ಇತರೇ ಮಾಹಿತಿಗಳನ್ನು SATS ನಲ್ಲಿ ಬದಲಾಯಿಸುವುದು ‌ಹೇಗೆ?*

➡️ಮಗುವಿನ ಹೆಸರು, ತಂದೆಯ ಹೆಸರು ತಾಯಿಯ ಹೆಸರು ಮತ್ತು ಜನನ ದಿನಾಂಕದ 50% ತಿದ್ದುಪಡಿ ಮಾಡಲು ಶಾಲಾ ಲಾಗಿನ್ ನಲ್ಲಿ ಅವಕಾಶ ನೀಡಲಾಗಿದೆ. ಈ 4ನ್ನು ಹೊರತುಪಡಿಸಿ ಉಳಿದ ಮಾಹಿತಿಗಳನ್ನು‌ ಜುಲೈ ನಿಂದ ಮಾರ್ಚ್ ತಿಂಗಳುಗಳ ‌ನಡುವೆ ಯಾವಾಗ ‌ಬೇಕಾದರೂ ತಿದ್ದುಪಡಿ ಮಾಡಲು ಅವಕಾಶ ಶಾಲಾ ಲಾಗಿನ್ ನಲ್ಲಿ Update student details ನಲ್ಲಿ ಆಪ್ಶನ್ ಲಭ್ಯವಿದೆ.


👉 *ಪ್ರಶ್ನೆ : 7 DBT ಎಂದರೇನು?*

➡️ಯಾವುದೇ ವ್ಯಕ್ತಿಯ ಆಧಾರ್ ಸಂಖ್ಯೆ ಬಳಸಿ ಹಣ ವರ್ಗಾವಣೆ ಸರ್ಕಾರದ ಸೌಲಭ್ಯಗಳ ವರ್ಗಾವಣೆ ಮಾಡುವ ವಿಧಾನ. DIRECT BENEFIT TRANSFER.


👉 *ಪ್ರಶ್ನೆ : 8 DBT ಹೇಗೆ ಕಾರ್ಯನಿರ್ವಹಿಸುತ್ತದೆ?*

➡️ಡಿಬಿಟಿ ಸೌಲಭ್ಯಕ್ಕಾಗಿ ವ್ಯಕ್ತಿಯು Annexure 1 ರಲ್ಲಿ ತನ್ನ ಖಾತೆಗೆ ಆಧಾರ್ ಸಂಖ್ಯೆ ಸೀಡ್ ಮಾಡುವಂತೆ ಬ್ಯಾಂಕ್ ಗೆ ಕೋರಿಕೆ‌ ಸಲ್ಲಿಸಬೇಕು. ಬ್ಯಾಂಕ್ ‌ಸಿಬ್ಬಂದಿಗಳು ಈ ನಮೂನೆಯ ಪ್ರಕಾರ ವ್ಯಕ್ತಿಯ ಆಧಾರ್ ಮಾಹಿತಿಯನ್ನು National Payments Corporation Of India NPCI ಗೆ‌ ಅಪ್ಲೋಡ್ ಮಾಡಬೇಕು. 2-3 ದಿನಗಳಲ್ಲಿ ವ್ಯಕ್ತಿಯ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಸೀಡ್ ಆಗುತ್ತದೆ.


👉 *ಪ್ರಶ್ನೆ : 9 DBT STATUS ಏಕೆ ವಿಫಲವಾಗುತ್ತದೆ?*

➡️ ಹೆಚ್ಚಿನ ಬ್ಯಾಂಕ್ ಗಳಲ್ಲಿ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿರುತ್ತಾರೆ. ಆದರೆ ಸೀಡ್ ಮಾಡಿರುವುದಿಲ್ಲ. ಆಧಾರ್ ಲಿಂಕ್ ಮಾಡುವ ವಿಧಾನಕ್ಕೂ ಆಧಾರ್ ಸೀಡ್ ಮಾಡುವ ವಿಧಾನಕ್ಕೂ ವ್ಯತ್ಯಾಸವಿದೆ. DBT ಸರಿಯಾಗಬೇಕಾದರೆ ಬ್ಯಾಂಕ್ ನವರು ವ್ಯಕ್ತಿಯ ಖಾತೆಗೆ NPCI ಮೂಲಕ ಆಧಾರ್ ಮಾಹಿತಿಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ.


👉 *ಪ್ರಶ್ನೆ : 10 ಆಧಾರ್ ಸೀಡಿಂಗ್ ಅಥವಾ DBT ವಿಫಲವಾಗಲು ಇತರೇ ಕಾರಣಗಳೇನು*

➡️ ಮಗುವಿಗೆ 5 ವರ್ಷ ವಯಸ್ಸಾದಾಗ ನಂತರ ಆಧಾರ್ ಗೆ THUMB ಅಪ್ಡೇಟ್ ಆಗದಿರುವುದು.

➡️ ಬ್ಯಾಂಕ್ ಖಾತೆ ಬಳಸದೇ‌ ನಿಷ್ಕ್ರಿಯ ಆಗಿರುವುದು.

➡️ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ನಲ್ಲಿ ಹೆಸರು ವ್ಯತ್ಯಾಸವಿರುವುದು.


👉 *ಪ್ರಶ್ನೆ : 11 ಅಕ್ಷರ ದಾಸೋಹ DBT ಪಟ್ಟಿಯಲ್ಲಿ ಕೆಲವು ಮಕ್ಕಳ ಹೆಸರು ಏಕೆ‌ ಕಾಣಿಸುತ್ತಿಲ್ಲ?*

➡️SATS ನಲ್ಲಿ ಮಗುವಿನ ಆಧಾರ್ ಸಂಖ್ಯೆ ನಮೂದು ಮಾಡದಿರುವುದು. ನಮೂದು ಮಾಡಿದ ನಂತರ ಸ್ವಲ್ಪ ದಿನ ಕಾಯುವುದು.


👉 *ಪ್ರಶ್ನೆ : 12 ಅಕ್ಷರ ದಾಸೋಹ DBT ಒಂದು ಬಾರಿ VERIFY ಮಾಡಿದ ನಂತರವೂ ಮಗುವಿನ ಹೆಸರಿನ ಮುಂದೆ VERIFY ಎಂದೇ ಇದೆ ಏಕೆ?*

➡️ಒಂದು ಬಾರಿ ಮಾತ್ರ VERIFY ಆಪ್ಶನ್ ಬಳಸಿ. 2 ಬಾರಿ VERIFY ಮಾಡಬೇಡಿ. SATS-MDM ನಲ್ಲಿ ಮಾಹಿತಿ ಅಪ್ಡೇಟ್ ಆಗುವವರೆಗೂ ಕಾಯಿರಿ. Fail ಬಂದರೆ ಮಾತ್ರ ಆಧಾರ್ ಸೀಡಿಂಗ್ ಮಾಡಿಸಿ.


ಮಧ್ಯಾಹ್ನ ಉಪಾಹಾರ ಯೋಜನೆ


*ಏಪ್ರಿಲ್,ಜುಲೈ ಅಗಷ್ಟ 2021 ತಿಂಗಳ ಆಹಾರ ಧಾನ್ಯ ವಿತರಣಾ ಆದೇಶ ಒಟ್ಟು _67 ದಿನಗಳು*



ಅಡುಗೆ ಸಾದಿಲ್ವಾರು ಹೆಚ್ಚಳದ ಆದೇಶ ದಿನಾಂಕ 28/09/2016
2.ಅಕ್ಷರ ದಾಸೋಹದ ಸಮುದಾಯ ದತ್ತ ಶಾಲೆ ನಮೂನೆಗಳು
3.MDM message Based monitoring system ಆದೇಶ
4.User Manual for MDM Message Based Monitoring System school level
5.ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ ಅನುಸರಿಸಬೇಕಾದ ಸುರಕ್ಷತಾ ನಿಯಮಗಳು
6.Check SMS status and Report of MDM -Attendance 
7.ಅಕ್ಷರ ದಾಸೋಹದ message ಮಾಡುವ ಸಂಬಂಧಿಸಿದ PPt
8.ಅಕ್ಷರ ದಾಸೋಹದ ಅಂಕಿಅಂಶಗಳ ಬಗ್ಗೆ ಸಂಕ್ಷಿಪ್ತ ಚಿತ್ರಣ
9.ಅಕ್ಷರ ದಾಸೋಹದ ಮೆನುಚಾರ್ಟ್ ಮತ್ತು ನೀಡಬೇಕಾದ ದಿನಸಿಗಳ ಪ್ರಮಾಣ
10.ಹಾಲಿನ ಪರಿಮಾಣ ಮತ್ತು ಪರಿವರ್ತನಾ ವೆಚ್ಚ
11.ವಿಶ್ವ ಕೈ ತೊಳೆಯುವ ದಿನ ಆಚರಿಸುವ ಬಗ್ಗೆ ಆದೇಶ
12.ಬಿಸಿಯೂಟದ ದಾಸ್ತಾನು ಲೆಕ್ಕಚಾರ ನಮೂನೆ




1.ಮಧ್ಯಾಹ್ನ ಉಪಾಹಾರ ಯೋಜನೆಯ ಅಡುಗೆ ತಯಾರಿಕೆ‌‌ ವೆಚ್ಚ ಹೆಚ್ಚಿಸಿದ ಆದೇಶ
2.ಅಡುಗೆ ಸಿಬ್ಬಂದಿಯ ಜವಬ್ದಾರಿಗಳು
3.SATS MDM online ಭರ್ತಿ ಮಾಡುವ ಬಗ್ಗೆ
4.ಅಡುಗೆ ಸಿಬ್ಬಂದಿಯ ನೇಮಕ ಕುರಿತು
5.ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಕುರಿತು
6.ಆಹಾರ ತಯಾರಿಕಾ ವೆಚ್ಚದ ಕುರಿತು
7.ADMMS job chart
8.ಅಡುಗೆ ತಯಾರಿಸುವ ಪೂರ್ವ ಮತ್ತು ನಂತರ ಕೈಗೊಳ್ಳಬೇಕಾದ ಕ್ರಮಗಳ ಕುರಿತು
9.ಅಡುಗೆ ಸಿಬ್ಬಂದಿ ಮರಣ ಮತ್ತು ಅಪಘಾತ ಪರಿಹಾರ ಆದೇಶ
10.ಸ್ವಯಂ ಸೇವಾ ಸಂಸ್ಥೆಗಳಿಂದ ಆಹಾರ ಪಡೆಯುತ್ತಿರುವ ಶಾಲೆಗಳಲ್ಲಿ‌ಅಡುಗೆ ಸಿಬ್ಬಂದಿಯ ನೇಮಕ ಕುರಿತು
11.ಉಪಾಹಾರ ಯೋಜನೆಯ ಲೊಗೊ ಬಳಕೆ ಬಗ್ಗೆ
12.ಕ್ಷೀರಭಾಗ್ಯ ಯೋಜನೆಯ ವೆಚ್ಚದ ಮಾಹಿತಿ
13.2020-21ನೇ ಸಾಲಿನ ಬರಗಾಲ ಪೀಡಿತ ಪ್ರದೇಶಗಳಲ್ಲಿ ಆಹಾರ ಧಾನ್ಯ ವಿತರಿಸುವ ಬಗ್ಗೆ
14.MDM DATA FORMAT
15.ಅಡುಗೆ ಸಿಬ್ಬಂದಿ ನೇಮಕ ಬಿಡುಗಡೆ ಸಂಬಂಧಿಸಿದ MDM ಶಿರಾ ರವರ ಆದೇಶ



http://dasoha.karnataka.gov.in/public/SchoolWiseMonthlyAttendance.aspx

MDM logo 

https://drive.google.com/file/d/1YANdc8crmZl8tq5ngWv-syxU2Ip0L2v3/view?usp=drivesdk


ಅಕ್ಷರ ದಾಸೋಹಕ್ಕೆ ಸಂಬಂಧಿಸಿದ ಎಲ್ಲಾ ಆದೇಶಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಸಿಯೂಟ ತಯಾರಿಕೆಯಲ್ಲಿ ವಹಿಸಬೇಕಾದ ಎಚ್ಚರಿಕೆಗಳು.



★ಅಕ್ಷರ ದಾಸೋಹ ಕಾರ್ಯಕ್ರಮದ ಅನುಷ್ಠಾನಕ್ಕೆ ಈ ಕೆಳ ಕಾಣಿಸಿದ ಅಂಶಗಳನ್ನುಅಳವಡಿಸಿಕೊಳ್ಳುವುದು.

*************************************************


★ಮುಖ್ಯ ಶಿಕ್ಷಕರು ಸರಕಾರಿ ರಜೆ ಹೊರತುಪಡಿಸಿ ಯಾವುದೇ ಕಾರಣಕ್ಕೂ ಅಕ್ಷರದಾಸೋಹ ಕಾರ್ಯಕ್ರಮ ನಿಲ್ಲದಂತೆ ಮುಂಜಾಗ್ರತೆವಹುಸಬೇಕು.
★ಮುಖ್ಯ ಶಿಕ್ಷಕರು ಪ್ರತಿ ತಿಂಗಳು ಅಗತ್ಯವಿರುವ ಆಹಾರ ಮತ್ತು ಸಾದಿಲ್ವಾರು ಬೇಡಿಕೆಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಹಿಂದಿನ ತಿಂಗಳ ಉಪಯೋಗತಾ ಪ್ರಮಾಣಪತ್ರದೊಂದಿಗೆ ಪ್ರತಿ ತಿಂಗಳು 25 ನೇ ತಾರೀಖಿನೊಳಗಾಗಿ ತಾಲೂಕು ಕಛೇರಿಗೆ ತಲುಪಿಸಬೇಕು.
★ನಿಗದಿತ ಅವಧಿಯಲ್ಲಿ ಆಹಾರ ಸಾಮಗ್ರಿಗಳು ಪೂರೈಕೆಯಾಗದಿದ್ದಲ್ಲಿ,ಸ್ಥಳಿಯವಾಗಿ ಲಭ್ಯವಾಗುವ ಆಹಾರ ಸಾಮಗ್ರಿಗಳನ್ನು ಬಳಸಿಕೊಂಡು ಮಕ್ಕಳಿಗೆ ಆಹಾರ ವಿತರಣೆ ಮಾಡಬೇಕು.ಯಾವುದೇ ಕಾರಣಕ್ಕೂ ಮಕ್ಕಳು ಹಸಿವಿನಿಂದ ಉಳಿಯಬಾರದು.
★ಕಳಪೆ ಮಟ್ಟದ ಆಹಾರ ಸಾಮಗ್ರಿಗಳನ್ನು ಸ್ವೀಕರಿಸಬಾರದು.ಹಾಗೂ ಒಂದು ವೇಳೆ ಕಳಪೆ ಮಟ್ಟದ ಆಹಾರ ಸಾಮಗ್ರಿ ಬಳಸಿ ಬಿಸಿಊಟ ತಯಾರಿಸಬಾರದು.
★ಪ್ರತಿ ತಿಂಗಳು ಪಡೆದ ಆಹಾರ ಧಾನ್ಯಗಳು ಕೆಡದಂತೆ ಶೇಕರಿಸಿಟ್ಟುಕೊಳ್ಳಬೇಕು.
★ನಮೂನೆ-2 ರಲ್ಲಿದ್ದ ಆಹಾರ ದಾಸ್ತಾನಿಗೂ ಹಾಗೂ ಭೌತಿಕ ದಾಸ್ತಾನಿಗೂ ತಾಳೆಯಾಗಬೇಕು.ವ್ಯತ್ಯಾಸ ಕಂಡುಬಂದಲ್ಲಿ ಮುಖ್ಯಶಿಕ್ಷಕರೇ ಜವಾಬ್ದಾರರಾಗಿರುತ್ತಾರೆ.
★ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ,ಎಲ್ಲಾ ಮಾಹಿತಿಗಳನ್ನು/ವಹಿಗಳನ್ನು ಪ್ರತಿನಿತ್ಯ ನಿರ್ವಹಿಸಬೇಕು.
★ಪ್ರತಿದಿನ ಮಕ್ಕಳಿಗೆ ಆಹಾರ ವಿತರಿಸುವ ಮುಂಚೆ ಇಬ್ಬರು ಶಿಕ್ಷಕರು ಆಹಾರ ಸೇವಿಸಿ ಉತ್ತಮ ಗುಣಮಟ್ಟದ ಆಹಾರವೆಂದು ದೃಢೀಕರಿಸಿದ ನಂತರ ವಹಿಯಲ್ಲಿ ದಾಖಲಿಸಿ ಮಕ್ಕಳಿಗೆ ವಿತರಿಸಬೇಕು.
★ಅನಿಲ ಸಿಲಿಂಡರನ್ನು ಮಿತವಾಗಿ ಬಳಸಬೇಕು.ಸಿಲಿಂಡರ್ ಸ್ವೀಕರಿಸುವಾಗ ರಿಜಿಸ್ಟರ್ ನಂಬರ್ ಬರೆದುಕೊಳ್ಳಬೇಕು.
ಕಳ್ಳತನವಾಗದಂತೆ ನೋಡಿಕೊಳ್ಳಬೇಕು.
★ಮಾತ್ರೆಗಳನ್ನು ನಿಗದಿತ ಅವಧಿಯಲ್ಲಿ ಮಕ್ಕಳಿಗೆ ನೀಡಬೇಕು.ಹಾಗೂ ವರ್ಗವಾರು ನೀಡಿದ ಮಾತ್ರೆಗಳ ದಾಖಲೆಗಳನ್ನಿಡಬೇಕು.
★ತಾಯಂದಿರ ಸಮೀತಿಯನ್ನು ರಚಿಸಿ ವಾರ್ಷಿಕ ವೇಳಾಪಟ್ಟುಯಂತೆ ಕನಿಷ್ಟ 4 ಜನ ತಾಯಂದಿರು ಸರದಿಯ ಮೇಲೆ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡುವುದು.
★ಮಕ್ಕಳಿಗೆ ಬಿಸಿಯೂಟ ವಿತರಿಸುವಾಗ ಎಲ್ಲ ಶಿಕ್ಷಕರು ತಪ್ಪದೇ ಹಾಜರಿದ್ದು,ಶಿಸ್ತಿನಿಂದ ವ್ಯವಸ್ಥಿತವಾಗಿ ಮಕ್ಕಳಿಗೆ ಆಹಾರ ವಿತರಣೆ ಮಾಡಬೇಕು.
★ಅಡುಗೆ ಕೋಣೆಯನ್ನು ಪಾತ್ರೆಪರೀಕರಗಳನ್ನು ಅಡುಗೆ ಪ್ರಾರಂಭದ ಮುನ್ನ ಮತ್ತು ಮುಗಿದ ನಂತರ ಸ್ವಚ್ಚಗೊಳುಸಬೇಕು.
★ಪ್ರತಿ ಶಾಲೆಯಲ್ಲಿ ಶಾಲಾ ಕೈತೋಟ ನಿರ್ವಹಿಸಬೇಕು.ಹಾಗೂ ಕೈತೋಟದಲ್ಲಿ ಬೆಳೆದ ತರಕಾರಿಗಳನ್ನು ಬಿಸಿಯೂಟಕ್ಕೆ ಬಳಸಿಕೊಳ್ಳಬೇಕು.
★ಅಕ್ಷರದಾಸೋಹ ಕಾರ್ಯಕ್ರಮದಡಿ ಖರ್ಚುಮಾಡಿದ ಪ್ರತಿಯೊಂದು ಅನುದಾನಕ್ಕೆ ಓಚರ್ಗಳನ್ನು ನಿಯಮಾನುಸಾರ ನಿರ್ವಹಿಸಿ ನಗದು ಪುಸ್ತಕವನ್ನು ಪ್ರತಿನಿತ್ಯ ನಿರ್ವಹಿಸಬೇಕು.
★ಪ್ರತಿವರ್ಷದ ಕೊನೆಗೆ ಅಕ್ಷರ ದಾಸೋಹ ದಾಖಲೆಗಳನ್ನು ಓಚರ್ ಸಹಿತ ಕಾಟನ್ ಬಟ್ಟೆಯಲ್ಲಿ ಬಂಡಲ್ ಮಾಡಿ ಇಡಬೇಕು.
★ರಜಾ ದಿನಗಳಲ್ಲಿ ಸಿಲಿಂಡರಗಳು ಹಾಗೂ ಆಹಾರ ಧಾನ್ಯಗಳು ಕಳ್ಳತನವಾಗದಂತೆ ಮುಂಜಾಗ್ರತೆವಹಿಸಬೇಕು.
★ಅರ್ಧವಾರ್ಷಿಕ ಹಾಗೂ ವಾರ್ಷಿಕ ರಜೆಗಳಲ್ಲಿ ಆಹಾರ ಧಾನ್ಯಗಳ ದಾಸ್ತಾನು ಉಳಿಯದಂತೆ ಬೇಡಿಕೆಯನ್ನು ಸಲ್ಲಿಸಬೇಕು.ಬೇಡಿಕೆಯಿಲ್ಲದಿದ್ದರೂ ಶೂನ್ಯವರದಿಯನ್ನು ಸಲ್ಲಿಸಬೇಕು.
★ದಾನಿಗಳ ಮನವೊಲಿಸಿ ಅಕ್ಷರದಾಸೋಹ ಕಾರ್ಯಕ್ರಮಕ್ಕೆ ಬೇಕಾಗುವ ಕುಕ್ಕರ್,ತಟ್ಟೆ,ಲೋಟ,ಬಕೀಟಇತ್ಯಾದಿಗಳನ್ನು ಪಡೆಯಲು ಶ್ರಮಿಸಬೇಕು.
★ಬಿಸಿಯೂಟ ಪಡೆಯುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರಧಾನ್ಯಗಳನ್ನು ಸಾದಿಲ್ವಾರುಗಳನ್ನು ಬಳಸಬೇಕು.
★ಆಹಾರ ಧಾನ್ಯಗಳನ್ನು ಲಾರಿಗಳಿಂದ ಪಡೆಯುವಾಗ ತೂಕ ಸರಿ ಇದ್ದ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
★ಖಾಲಿ ಚೀಲಗಳ ಬಗ್ಗೆ ಲೆಕ್ಕ-ಪತ್ರ ಇಟ್ಟು ನಿಯಮಾನಯಸಾರ ಕ್ರಮ ಕೈಗೊಳ್ಳಬೇಕು. ಖಾಲಿ ಚೀಲ ಮಾರಾಟದ ಹಣವನ್ನು ಕಡ್ಡಾಯವಾಗಿ ಅಕ್ಷರದಾಸೋಹ ಖಾತೆಗೆ ಜಮಾ ಮಾಡಬೇಕು.
★ಮುಖ್ಯಶಿಕ್ಷಕರು ಕಡ್ಡಾಯವಾಗಿ ಅಡುಗೆ ಸಿಬ್ಬಂದಿಗಳ ವೇತನವನ್ನು ಚೆಕ್ ಮೂಲಕ ಪಾವತಿಸತಕ್ಕದ್ದು.
*************************************************
★ಬಿಸಿಯೂಟಕ್ಕೆ ಸಂಬಂದಿಸಿದ ಪ್ರಮುಖ ದಾಖಲೆಗಳು
*************************************************


1★ದೈನಂದಿನ ಹಾಜರಾತಿ ಮತ್ತು ಫಲಾನುಭವಿಗಳ ಮಾಹಿತಿ
2★ಅಕ್ಕಿ/ಗೋಧಿ/ಬೇಳೆ/ಎಣ್ಣೆ/ಸಾಂಬಾರ ಪದಾರ್ಥಗಳ ದಾಸ್ತಾನು ವಹಿ
3★ಸಾದಿಲ್ವಾರು ಪುಸ್ತಕ-ಕ್ಯಾಶ್ ಬುಕ್
4★ಅಡುಗೆ ಸಿಬ್ಬಂದಿಯ ದೈನಂದಿನ ಹಾಜರಾತಿ ಮತ್ತು ವೇತನ ಬಟವಾಡೆ ವಹಿ
5★ದಿನನಿತ್ಯ ತರಕಾರಿ ಖರ್ಚಿನ ವಿವರ
6★ಆಹಾರ ದಾನ್ಯಗಳ ಸರಬರಾಜಿನ ರಶಿದೀಗಳ ವಹಿ
7★ಆಹಾರ ಸರಬರಾಜು ವಹಿ
8★ಬೇಡಿಕೆ ಮತ್ತು ಉಪಯೋಗತಾ ಪ್ರಮಾಣ ಪತ್ರಗಳ ಕ್ರೋಢೀಕರಣ ವಹಿ
9★ಪ್ರತಿನಿತ್ಯ ಇಬ್ಬರು ಶಿಕ್ಷಕರು ಊಟಮಾಡಿದ ವಹಿ
10★ಶಿಲಿಂಡರ್ ಸ್ವೀಕರಿಸಿದ ಹಾಗೂ ಬಳಸಿದ ವಹಿ
11★ಮಾತ್ರೆಗಳನ್ನು ನೀಡಿದ ದಾಖಲೆ
12★ತಾಯಂದಿರ ಸಮೀತಿ ರಚಿಸಿದ ವಹಿ/ಹಾಗೂ ಪ್ರತಿ ದಿನ 4 ತಾಯಂದಿರು ಅಕ್ಷರದಾಸೋಹದಲ್ಲಿ ಭಾಗವಹಿಸಬೇಕು.
13★ಪಾತ್ರೆಗಳ ದಾಸ್ತಾನು ವಹಿ
14★ಖಾಲಿ ಚೀಲಗಳ ಲೆಕ್ಕಪತ್ರಗಳನ್ನಿಡಬೇಕು.
15★ಪ್ರತಿ ತಿಂಗಳು ಅಡುಗೆಯವರ ವೇತನ ಬಿಡಿಸಿಕೊಟ್ಟ ಬಗ್ಗೆ ಒಂದು ರಿಜಿಸ್ಟರ್ ನಲ್ಲಿ ಅವರವರ ಸಹಿ ತೆಗೆದುಕೊಂಡ ವಹಿ
16★ವೈಧ್ಯಕೀಯ ತಪಾಸನಾ ಪ್ರತಿ ಇಡುವುದು
17★ಅಗ್ನಿ ನಂದಕ ಅಳವಡಿಸಬೇಕು.
18★ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನೀಡುವುದು.
19★ತುರ್ತು ವೈಧ್ಯಕೀಯ ಯೋಜನೆ ತಯಾರಿಸಬೇಕು.
20★ ಮಧ್ಯಾಹ್ನ ಬಿಸಿಯೂಟ ಯೋಜನೆಯ ಲಾಂಚನ ಬರೆಸುವುದು.
21★ಪ್ರತಿ ವರ್ಷದ ಕೊನೆಗೆ ಅಕ್ಷರದಾಸೋಹ ದಾಖಲೆಗಳನ್ನು ಓಚರ್ ಸಹಿತ ಕಾಟನ್ ಬಟ್ಟೆಯಲ್ಲಿ ಬಂಡಲ್ ಮಾಡಿ ಇಡಬೇಕು.
22★ಅಕ್ಷರ ದಾಸೋಹದ ಸಾಮಾನ್ಯ ಮಾಹಿತಿಯನ್ನು ಅಡುಗೆ ಕೋಣೆಯ ಹೊರಗೋಡೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಬರೆಸುವುದು.
************************************************
ಅಡುಗೆ ಸಿಬ್ಬಂದಿ ದಿನಚರಿ
★9:30 ಕ್ಕೆ ಶಾಲೆಗೆ ಹಾಜರಾಗುವುದು.
★10:30 ಕ್ಕೆ ಪಾತ್ರೆ ಪರಿಕರಗಳ ಸ್ವಚ್ಚತೆ ಮಾಡುವುದು.
★ಬೆಳಿಗ್ಗೆ 10:30 ರಿಂದ 11:00—ಮುಖ್ಯ ಅಡುಗೆಯವರು ತರಗತಿವಾರು ಹಾಜರಾತಿ ಮತ್ತು ಬಿಸಿಯೂಟ ಮಾಡುವ ಮಕ್ಕಳ ಸಂಖ್ಯೆಯನ್ನು ನಮೂದಿಸಿ ತರಗತಿ ಶಿಕ್ಷಕರಿಂದ ಸಹಿ ತೆಗೆದುಕೊಳ್ಳುವುದು.
★11:00 ರಿಂದ 11:15 —ಬಿಸಿಯೂಟ ಮಾಡುವ ಮಕ್ಕಳ ಸಂಖ್ಯೆಗನುಗುಣವಾಗಿ ಆಹಾರ ಧಾನ್ಯಗಳನ್ನು ಅಳತೆಮಾಡಿ ತೆಗೆದುಕೊಳ್ಳುವುದು.
★11:15 ರಿಂದ 1:15—ಅಡುಗೆ ತಯಾರಿಸುವುದು.ಪ್ರತಿ ದಿನದ ಖರ್ಚು ವೆಚ್ಚಗಳನ್ನು ಬರೆಯುವುದು.
★1:15 ರಿಂದ 1:55—ಮಕ್ಕಳನ್ನು ಸಾಲಾಗಿ ಕೂರಿಸಿ ಊಟ ಬಡಿಸುವುದು.
★1:55-ಅನಿಲ ಸ್ವಿಚ್ಚ್ ಆಫ್ ಮಾಡಿ,ಪಾತ್ರೆ ಪರಿಕರಗಳನ್ನು ತೊಳೆಯುವುದು.
*************************************************
ಮುಖ್ಯ ಹಾಗೂ ಸಹಾಯಕ ಅಡುಗೆಯವರ ಕರ್ತವ್ಯಗಳು.
★ಅಡುಗೆ ಕೇಂದ್ರದ ಉತ್ತಮ ನಿರ್ವಹಣೆಯು /ಸ್ವಚ್ಚತೆ ಮುಖ್ಯ ಅಡುಗೆಯವರ ಜವಾಬ್ದಾರಿಯಾಗಿರುತ್ತದೆ.
★ಶಾಲಾ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಬೇಕು.
★ಸಿಲಿಂಡರ್ ದುರಸ್ತಿ ಬಗ್ಗೆ ಮುಖ್ಯಗುರುಗಳ ಜವಾಬ್ದಾರಿ
★sdmc ಸಮ್ಮುಖದಲ್ಲಿ ಆಹಾರ ಪದಾರ್ಥ ಪಡೆದು,ಗುಣಮಟ್ಟ ಪರಿಕ್ಷಿಸಿ,ಅಡುಗೆ ತಯಾರಿಸುವದು.
★೧೫/ಒಂದು ತಿಂಗಳಿಗೆ ಸಾಕಾಗುವಷ್ಟು ಸಾಂಬಾರು ಪದಾರ್ಥ ಖರೀದಿ ಮಾಡಿ ವೋಚರ ಇಡುವುದು.
★ಹಾಲಿನ ಪುಡಿ ದಾಸ್ತಾನು ಸುರಕ್ಷಿತವಾಗಿಡಬೇಕು.
★ಶುಚಿಯಾದ ಹಾಲನ್ನು ತಯಾರಿಸಿ ಬಡಿಸುವುದು.
★ದಿನಾಲು/ವಾರಕ್ಕೊಂದು ಸಾರಿ ತರಕಾರಿ ಖರೀದಿಸಿ ವೋಚರ್ ಗಳನ್ನಿಡುವುದು.
★ಅನಿಲ ವಿತರಕರಿಂದ ಗ್ಯಾಸ ಪಡೆಯುವುದು.ತೂಕ 14.2kg ಇರುವುದನ್ನು ಖಾತ್ರಿ ಪಡಿಸಿಕೊಳ್ಳುವುದು.ಸಿಲಿಂಡರಿ
ನ ತಳಭಾಗದಲ್ಲುರುವ ನಂ.ಅನ್ನು ದಾಸ್ತಾನು ಪುಸ್ತಕದಲ್ಲಿ ನಮೂದಿಸುವುದು.
★ಸಾಂಬಾರು ಪದಾರ್ಥಗಳನ್ನು ಒಂದು ವಾರಕ್ಕೆ ಸಾಕಾಗುವಷ್ಟು “ಸಾಂಬಾರು ಪುಡಿ” ತಯಾರಿಸಿಕೊಳ್ಳುವುದು.
★ಹಾಜರಾತಿ ಮತ್ತು ಫಲಾನುಭವಿಗಳ ಸಂಖ್ಯೆ ಪಡೆದು ಮುಖ್ಯಗುರುಗಳಿಂದ ದೃಢೀರಿಸಿಕೊಳ್ಳಬೇಕು.
★ಕುಡಿಯುವ ನೀರು ಶುದ್ದವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
★ಆಹಾರ ತಯಾರಿಸಿದ ನಂತರ ಅದರ ಗುಣಮಟ್ಟವನ್ನು ಪರೀಕ್ಷೆ ಮಾಡುವುದು.
★ಅಡುಗೆ ಅನಿಲವನ್ನು ಸುರಕ್ಷಿತವಾಗಿ/ ಮಿತವಾಗಿ ಬಳಕೆ
★ಅಡುಗೆ ಮನೆಯೊಳಗೆ ಅಪರಿಚಿತರು ಬರದಂತೆ ಮುಂಜಾಗ್ರತೆವಹಿಸಬೇಕು.
★ಪ್ರತಿ ತಿಂಗಳು ಬಳಕೆ ಮ/ಉಳಿಕೆ/ಬೇಡಿಕೆ ಪಟ್ಟಿಯನ್ನು ತಯಾರಿಸಿ ಅಧ್ಯಕ್ಷರು,ಮುಖ್ಯ ಶಿಕ್ಷಕರಿಂದ ದೃಢೀಕರಣ ಮಾಡಿಕೊಂಡು crp ಮೂಲಕ ಅಕ್ಷರದಾಸೋಹ ಅಧಿಕಾರಿಗಳಿಗೆ ಮುಟ್ಟಿಸುವುದು.
★ಮೇಲಾಧಿಕಾರಿಗಳು ತಪಾಸಣೆಗೆ ಬಂದಾಗ ಅಗತ್ಯ ಮಾಹಿತಿಗಳನ್ನು ಒಪ್ಪಿಸುವುದು.
★ಮುಖ್ಯ ಅಡುಗೆಯವರು ರಜೆ ಹೋಗುವ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರ ಅನುಮತಿ ಪಡೆಯುವುದು.
ಮುಖ್ಯ ಶಿಕ್ಷಕರ ಜವಾಬ್ದಾರಿಗಳು
★ಆಹಾರ ಧಾನ್ಯಗಳ ಬಳಕೆ ಪ್ರಮಾಣ ಪತ್ರ/ಬೇಡಿಕೆ ಪ್ರಮಾಣ ಪತ್ರ ಅಕ್ಷರದಾಸೋಹ ಅಧಿಕಾರಿಗಳಿಗೆ ಸಲ್ಲಿಕೆ
★ಆಹಾರ ಧಾನ್ಯಗಳನ್ನು ವಿಲೇವಾರಿ ಮಾಡುವಾಗ ತೂಕ/ಗುಣಮಟ್ಟವನ್ನು ಪರಿಶಿಲುಸಬೇಕು.
★ಅಡುಗೆ ಗೆ ಸಂಬಂದಿಸಿದಂತೆ ಎಲ್ಲ ವಿಷಯಗಳಲ್ಲಿಯೂ ಮುಖ್ಯ ಅಡುಗೆಯವರು ಗಮನ ಹರಿಸುತ್ತಿರಬೇಕು.
★ತಾಯಂದಿರ ಸಮೀತಿ ರಚಿಸಬೇಕು.
★ಪ್ರತಿ ದಿನ ರುಚಿ ನೋಡಲು ಶಿಕ್ಷಕರನ್ನು ನೇಮಿಸಿ ವಹಿಯಲ್ಲಿ ದಾಖಲಿಸುವುದು.
★ಮಕ್ಕಳನ್ನು ಬಿಸಿಯೂಟ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು.
★ಶಾಲಾ ಶಿಕ್ಷಕರ ಮೇಲುಸ್ತುವಾರಿಯಲ್ಲಿ ಸುರಕ್ಷಿತವಾಗಿ ಅಡುಗೆ ಬಡಿಸುವುದನ್ನು ವ್ಯವಸ್ಥೆ ಮಾಡಿಕೊಳ್ಳುವುದು.
★ಅಪರಿಚಿತರು ಪ್ರವೇಶಿಸದಂತೆ ನೋಡಿಕೊಳ್ಳುವುದು.
★ಅನಾಹುತ ಅಸಕಸ್ಮಿಕ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು.
★ಅಗ್ನಿ ನಂದಕವನ್ನು ಅಡುಗೆ ಕೋಣೆಯಲ್ಲಿ ಅಳವಡಿಸಬೇಕು.ಸಮಯಕ್ಕೆ ಸರಿಯಾಗಿ ರೀಫಿಲ್ಲಿಂಗ ಮಾಡಿಸಿ ಚಾಲನೆಯಲ್ಲಿಟ್ಟಿರಬೇಕು.
★ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿ health card ನಿರ್ವಹಿಸುವುದು.
★ದಾಖಲೆಗಳನ್ನು ನಿರ್ವಹಿಸುವುದು,ಪರಿಶಿಲಿಸುವುದು.
★ಒಟ್ಟಾರೆ ಅಕ್ಷರದಾಸೋಹ ಯಶಸ್ವಿಗೊಳಿಸಲು ಮುಖ್ಯಗುರುಗಳು ಸಹ ಕೈಜೋಡಿಸಬೇಕು.
————————————-
*ಶಾಲಾ ಬಿಸಿಯೂಟ ತಯಾರಿಕೆಯಲ್ಲಿ ಎಚ್ಚರವಹಿಸಿ- 
*ಶಾಲಾ ಕೆಲಸದ ದಿನಗಳಲ್ಲಿ (ಪರೀಕ್ಷಾ ದಿನಗಳನ್ನು ಸೇರಿಸಿ) ಹಾಗೂ ರಾಷ್ಟ್ರೀಯ ಹಬ್ಬಗಳು, ಸರಕಾರದಿಂದ ಆಚರಿಸಲಾಗುತ್ತಿರುವ ಗಣ್ಯರ ಜನ್ಮ ದಿನಗಳಂದು ತಪ್ಪದೇ ಬಿಸಿಯೂಟ ನೀಡಬೇಕು.
*ಅಪೌಷ್ಠಿಕತೆ ನಿವಾರಿಸಲು ವಿದ್ಯಾರ್ಥಿಗಳಿಗೆಪೌಷ್ಠಿಕಾಂಶ ಮಾತ್ರೆಗಳನ್ನು ನೀಡಲಾಗುತ್ತಿದ್ದು, ನಿಗದಿಪಡಿಸಿರುವ ದಿನಗಳಲ್ಲಿ ನಿಗದಿತ ಪ್ರಮಾಣದಲ್ಲಿ ನೀಡಬೇಕು. ಹೀಗೆ ಮಾತ್ರೆಗಳನ್ನು ನೀಡುವಾಗ ಮಾತ್ರೆಯ ಅವಧಿ ಮುಕ್ತಾಯದ ದಿನಾಂಕವನ್ನು ಕಡ್ಡಾಯವಾಗಿ ಪರಿಶೀಲಿಸಿದ ನಂತರವಷ್ಟೇ ವಿದ್ಯಾರ್ಥಿಗಳಿಗೆನೀಡಬೇಕು. ಇಲಾಖೆಯಿಂದ ಸರಬುರಾಜು ಮಾಡಿರುವ ಮಾತ್ರೆಗಳನ್ನು ನಿಯಮಾನುಸಾರ ಮಕ್ಕಳು ಊಟ ಮಾಡಿದ ನಂತರ ಕಡ್ಡಾಯವಾಗಿ ವಿತರಣೆಮಾಡಬೇಕು. ಯಾವುದೇ ಕಾರಣಕ್ಕೂ ಊಟಕ್ಕಿಂತ ಮೊದಲು ಮಾತ್ರೆಗಳನ್ನು ಮಕ್ಕಳಿಗೆ ವಿತರಿಸಬಾರದು. ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು. ಶಾಲೆಯಲ್ಲಿ ಮುಂಜಾಗೃತ ಕ್ರಮವಾಗಿ ತುರ್ತು ಚಿಕಿತ್ಸೆಗೆ ಎಮರ್ಜೆನ್ಸಿ ಮೆಡಿಕಲ್ ಪ್ಲಾನ್ ಕಡ್ಡಾಯವಾಗಿ ವ್ಯವಸ್ಥೆ ಮಾಡಿ ಇರಿಸಿಕೊಳ್ಳಬೇಕು.ಈ ವಿವರವನ್ನು ಶಾಲೆಯ ಗೋಡಯ ಮೇಲೆ ಬರೆಸಬೇಕು. ಅಲ್ಲದೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು.ಪ್ರತಿ ವರ್ಷ ನಡೆಸುವ ರೀತಿಯಲ್ಲಿಯೇ, ಎಲ್ಲಾ ಮಕ್ಕಳನ್ನು ಶಾಲೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಹಾಗೂ ತಪಾಸಣೆಗಾಗಿ ಬಂದ ತಂಡದಿಂದಲೇ ಶಾಲಾ ಅಡುಗೆ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಿಸಬೇಕು.

* ಶಾಲಾ ಕೈತೋಟದಲ್ಲಿ ಬೆಳೆಯುವ ಹಸಿರು ಸೊಪ್ಪು, ತರಕಾರಿಗಳನ್ನು ಬಿಸಿಯೂಟ ಕಾರ್ಯಕ್ರಮಕ್ಕೆ ನಿಗದಿಪಡಿಸಿರುವ ಅವಕಾಶಗಳ ಜೊತೆಗೆ ಹೆಚ್ಚುವರಿಯಾಗಿ ಬಳಸುವದು. ಅವಕಾಶವಿರುವಡೆ ಶಾಲಾ ಕೈ ತೋಟವನ್ನು ಬೆಳೆಸಿ ಸಂರಕ್ಷಿಸುವುದು. ಅಡುಗೆ ತಯಾರಿಸಲು ಸ್ವಚ್ಛ ಹಾಗೂ ತಾಜಾ ತರಕಾರಿ, ಸೊಪ್ಪುಗಳನ್ನು ಮಾತ್ರ ಬಳಸಬೇಕು.

*ಅಡುಗೆ ಅನಿಲ ಸಿಲಿಂಡರ ಉಪಯೋಗಿಸಿ ಅಡುಗೆಯವರು ಬಿಸಿಯೂಟ ತಯಾರು ಮಾಡುವಾಗ ಕಡ್ಡಾಯವಾಗಿ ಏಫ್ರಾನ್ ಧರಿಸಿಯೇ ಜಾಗ್ರತೆ ಮತ್ತು ಸುರಕ್ಷತೆಯಿಂದ ತಯಾರಿಸಬೇಕು.

*ಕುಕ್ಕರ್ ಬಳಕೆ ಮಾಡಿ ಅಡುಗೆ ತಯಾರಿಸುವ ಶಾಲೆಗಳ ಮುಖ್ಯ ಶಿಕ್ಷಕರು/ ಶಿಕ್ಷಕರು/ಅಡುಗೆ ಸಿಬ್ಬಂದಿ ಕುಕ್ಕರಿನ ಸೇಪ್ಟಿ ವಾಲ್, ಗ್ಯಾಸಕೇಟ್, ವ್ಹಿಸಿಲ್ ಅನ್ನು ಆಗಾಗ್ಗೆ ನಿಯಮಿತವಾಗಿ ಪರಿಶೀಲಿಸುತ್ತಿರಬೇಕು. ಹವೆ ಪೂರ್ಣ ಹೋದ ನಂತರವೇ ಕುಕ್ಕರ್ ಮುಚ್ಚಳ ತೆರೆಯುವ ವಿಧಾನ ಅಳವಡಿಸಿಕೊಳ್ಳಬೇಕು.

* ಮುಖ್ಯೋಪಾದ್ಯಾಯರುಹಾಗೂ ಸಹ ಶಿಕ್ಷಕರು ಹಾಲು, ಆಹಾರದ ಗುಣಮಟ್ಟ, ರುಚಿ, ಶುಚಿತ್ವ ಇತ್ಯಾದಿಗಳನ್ನು ಪ್ರತಿ ದಿನ ಇಬ್ಬರು ಶಿಕ್ಷಕರಂತೆ ಸರದಿ ಪ್ರಕಾರ ಆಹಾರದ ರುಚಿ ನೋಡಿ, ಮಕ್ಕಳು ಸೇವಿಸಲು ಯೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡು,ಊಟದ ಬಗ್ಗೆ ವಹಿಯಲ್ಲಿ ದಾಖಲಿಸಬೇಕು.

* ಶಾಲೆಯಲ್ಲಿ ಸಂಗ್ರಹವಿರುವ ಆಹಾರ ಧಾನ್ಯಗಳನ್ನು ಬಳಸುವಾಗ, ಎಫ್ಐಎಫ್ಓ (ಈiಡಿsಣ Iಟಿ ಈiಡಿsಣ ಔuಣ) ಮಾದರಿಯಂತೆ ಮೊದಲು ಬಂದ ಆಹಾರ ಧಾನ್ಯಗಳನ್ನು ಮೊದಲು ಬಳಸಿ ನಂತರ ಬಂದ ಆಹಾರ ಧಾನ್ಯಗಳನ್ನು ನಂತರ ಬಳಸಬೇಕು.

*ಅಡುಗೆ ತಯಾರಿಕೆಗೆ ಸಂಗ್ರಹ ಮಾಡುವ ನೀರಿನ ತೊಟ್ಟಿ/ಟ್ಯಾಂಕಗಳನ್ನು ತಿಂಗಳಿಗೆ 2 ಬಾರಿ ಸ್ವಚ್ಛವಾಗಿ ತೊಳೆದು ನೀರನ್ನು ಸಂಗ್ರಹಿಸಿ, ಯಾವುದೇ ಕ್ರಿಮಿ-ಕೀಟಗಳನ್ನು ಬೀಳದಂತೆ ಮುಚ್ಚಳಿಕೆಯಿಂದ ರಕ್ಷಿಸುವುದು.
* ಆಹಾರ ಧಾನ್ಯಗಳನ್ನು ಕೆಡಲಾರದಂತೆ ಕಟ್ಟಿಗೆಯ ಹಲಗೆಯ ಮೇಲೆ ಸಂಗ್ರಹಿಸಿಡಬೇಕು.

*ಪ್ರತಿ ತಿಂಗಳು ಕಡ್ಡಾಯವಾಗಿ 25 ನೇ ತಾರಿಖಿನೊಳಗಾಗಿ ಆಹಾರಧಾನ್ಯದ ಬೇಡಿಕೆ, 3 ನೇ ತಾರಿಖೀನೊಳಗಾಗಿ ಬಳಕೆ, ಅಡುಗೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ ಹಾಜರಾತಿ ಪತ್ರ ಹಾಗೂ ಎಂ.ಐ.ಎಸ್. ಮಾಹಿತಿಯನ್ನು ಸಿ.ಆರ್.ಪಿ. ಯವರ ಮೂಲಕ ಕಾರ್ಯಾಲಯಕ್ಕೆ ಸಲ್ಲಿಸಬೇಕು.


* ಪ್ರತಿ ದಿನ ಮಕ್ಕಳ ಸಂಖ್ಯೆಗೆಅನುಗುಣವಾಗಿ ಆಹಾರ ಧಾನ್ಯಗಳು, ತರಕಾರಿ, ಸಾಂಬಾರ ಪದಾರ್ಥಗಳನ್ನು ಉಪಯೋಗಿಸಿ ಸ್ವಚ್ಛತೆ ಹಾಗೂ ಸುರಕ್ಷತೆಯಿಂದರುಚಿಕಟ್ಟಾಗಿ ಅಡುಗೆ ತಯಾರಿಸಬೇಕು.
*ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಮೆನು ಚಾರ್ಟನ್ನು ಹಾಕಿ ಅದರಂತೆಯೇ ಕ್ರಮವಹಿಸಬೇಕು.
*ಪ್ರತಿ ದಿನ ಎಲ್ಲಾ ಮಕ್ಕಳಿಗೆ ಊಟ ಬಡಿಸುವಾಗ ಮುಖ್ಯ ಶಿಕ್ಷಕರು ಸೇರಿದಂತೆ ಎಲ್ಲಾ ಶಿಕ್ಷಕರು ಹಾಜರಿದ್ದು ಸುರಕ್ಷಿತವಾಗಿ ಹಾಗೂ ಶಿಸ್ತಿನಿಂದ ಊಟ ಮಾಡಿಸಬೇಕು.
* ಯಾವುದೇಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು.
*ಪ್ರತಿ ದಿನ ಊಟಕ್ಕೆ ಮುಂಚೆ ಹಾಗೂ ಊಟದ ನಂತರ ಮಕ್ಕಳು ಕೈತೊಳೆಯ ಬೇಕು. ಕೈ ತೊಳೆಯಲು ಸಾಬೂನು ವ್ಯವಸ್ಥೆ ಮಾಡಬೇಕು. ಮಕ್ಕಳು ಕೈ ತೊಳೆಯಲು 20 ಮಕ್ಕಳಿಗೆ ಒಂದು ನಳದಂತೆ ಕಟ್ಟೆ ನಿರ್ಮಿಸಿಕೊಳ್ಳಬೇಕು. ಕಟ್ಟೆ ನಿರ್ಮಿಸಲು ಶಾಲಾ ಅನುದಾನ/ನಿರ್ವಹಣಾ ವೆಚ್ಚ/ದಾನಿಗಳ ಸಹಾಯವನ್ನು ಪಡೆಯಬಹುದಾಗಿದೆ.
*ಅಡುಗೆ ತಯಾರಿಸಲು ಸ್ವಚ್ಛ ಹಾಗೂ ಶುದ್ದವಾದ ನೀರನ್ನು ಬಳಸಬೇಕು. ಯಾವ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕವಿರುತ್ತದೆಯೋ ಆಯಾ ಶಾಲೆಗಳ ಮುಖ್ಯೋಪಾದ್ಯಾಯರು ಸಂಭಂದಿಸಿದ ಗ್ರಾಮ ಪಂಚಾಯತಗೆ ಪತ್ರ ನೀಡಿ ಮಕ್ಕಳಿಗೆ ಉಚಿತವಾಗಿ ಕುಡಿಯುವ ನೀರಿನ ಸೌಲಭ್ಯವನ್ನು ಪಡೆದುಕೊಳ್ಳುವಂತೆಈಗಾಗಲೆ ಸೂಚನೆ ನೀಡಲಾಗಿದೆ.
*ಈ ಹಿಂದೆ ತಿಳಿಸಿದಂತೆ 1 ರಿಂದ 10 ನೇ ತರಗತಿಯ ಎಲ್ಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ( ಸೋಮವಾರ, ಬುಧವಾರ, ಶನಿವಾರ ) 18 ಗ್ರಾಂ ಹಾಲಿನ ಪುಡಿಯಿಂದ ಹಾಲು ತಯಾರಿಸಿ ವಿತರಿಸಬೇಕು. ಒಂದು ವೇಳೆ ಹಾಲಿನ ಪುಡಿ ಮುಗಿದಲ್ಲಿ ಬೇರೆ ಶಾಲೆಯಿಂದ ಕಡ ತಂದು ಹಾಲು ತಯಾರಿಸಿ ವಿತರಿಸಬೇಕೆ ಹೊರತು ಖರೀದಿಸುವಂತಿಲ್ಲ.
*ಈ ಹಿಂದೆ ನೀಡಿರುವ ಆದೇಶದಂತೆ ವಾರಕ್ಕೊಮ್ಮೆ ಪ್ರತಿ ಶನಿವಾರ ಗೋಧಿ ಬಳಕೆ ಮಾಡಿ ಉಪ್ಪಿಟ್ಟು/ಚಪಾತಿ/ಪಾಯಸ/ಪೂರಿ ತಯಾರಿಸಿ ವಿತರಿಸಬೇಕು.
* ಶನಿವಾರದಂದು ತೊಗರಿ ಬೇಳೆಯನ್ನು ಬಳಸಬಾರದು.
* ಅಡುಗೆಗೆ ಡಬಲ್ಫೋರ್ಟಿಫೈಡ್ ಉಪ್ಪನ್ನು ಬಳಸಬೇಕು.
*ಅನುಷ್ಠನದಲ್ಲಾಗುವವಿಳಂಬ ಹಾಗೂ ವ್ಯತ್ಯಾಸಗಳಿಗೆ ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ)ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣಾಧಿಕಾರಿಗಳು ಅಕ್ಷರದಾಸೋಹ, ತಾಲೂಕಾ ಹಂತದಲ್ಲಿ ತಾಲೂಕಾ ಪಂಚಾಯತ್ನ ಕಾರ್ಯನಿರ್ವಹಣಾಧಿಕಾರಿಗಳು,ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಅಧಿಕಾರಿಗಳವರು ಜವಾಬ್ದಾರರಾಗಿರುತ್ತಾರೆ. ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರು, ಸಿ.ಆರ್.ಪಿ ಗಳ ಜವಾಬ್ದಾರಿಯಾಗಿರುತ್ತದೆ.
*ಅಕ್ಷರ ದಾಸೋಹ ಕಾರ್ಯಕ್ರಮದ ಮಾರ್ಗಸೂಚಿ ಪುಸ್ತಕದಲ್ಲಿ ಸೂಚಿಸಿರುವಂತೆ ಅಡುಗೆ ಸಿಬ್ಬಂದಿಯ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಣೆಗಳಲ್ಲಿ ಯಾವುದೇ ಲೋಪಗಳು ಉಂಟಾಗಿದ್ದಲ್ಲಿ ಅಡುಗೆ ಸಿಬ್ಬಂದಿಯವರೇ ನೇರ ಹೊಣೆಗಾರರಾಗಿರುತ್ತಾರೆ. ಇದರ ಮೇಲುಸ್ತುವಾರಿಯನ್ನು ಎಸ್.ಡಿ.ಎಂ.ಸಿ. ನಿರ್ವಹಿಸಬೇಕು

ಮೇಲುಸ್ತುವಾರಿಯನ್ನು ಎಸ್.ಡಿ.ಎಂ.ಸಿ. ನಿರ್ವಹಿಸಬೇಕು
ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಮಕ್ಕಳ  ಅನುಪಾತಕ್ಕೆ ಅಡುಗೆಯವರ ಸಂಖ್ಯೆ ವಿವರ
ಕ್ರ. ಸಂ.ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ವಿಭಾಗ
ಮಕ್ಕಳಸಂಖ್ಕೆಕೇಂದ್ರದ ಮಾದರಿಅಡುಗೆಯವರ ಸಂಖ್ಯೆ
1
1 ರಿಂದ 25 ರವರೆಗೆ
1
2
26 ರಿಂದ 100 ರವರೆಗೆ
ಬಿ
2
3
101 ರಿಂದ 200 ರವರೆಗೆ
ಸಿ
3
4
201 ರಿಂದ 300 ರವರೆಗೆ
ಡಿ
4
5
301 ರಿಂದ 500 ರವರೆಗೆ
5
6
501 ರಿಂದ 800 ರವರೆಗೆ
ಎಫ್
6
7
801 ರಿಂದ 1100 ರವರೆಗೆ
ಜಿ
7
8
1101 ರಿಂದ 1400 ರವರೆಗೆ
ಹೆಚ್
8
9
1401 ರಿಂದ 1700 ರವರೆಗೆ
9
10
1701 ರಿಂದ 25 ಮೇಲ್ಪಟ್ಟು
ಜೆ
10

ಅಡುಗೆಯವರ ಆಯ್ಕೆ



ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಮುನ್ಸಿಪಾಲಿಟಿ/ಪಟ್ಟಣ ಕಾರ್ಪೋರೇಷನ್ ವಾರ್ಡ್ ನ ಸದಸ್ಯರು ಈ ಸಮಿತಿಯ ಅಧ್ಯಕ್ಷರಾಗಿರಬೇಕು. 
ಎಸ್. ಡಿ. ಎಂ. ಸಿ. ಅಧ್ಯಕ್ಷರು-ಸದಸ್ಯರು, 
ಶಾಲಾ ಮುಖ್ಯಸ್ಥರು-ಸದಸ್ಯರು. 
ಪಟ್ಟಣ ಕಾರ್ಪೋರೇಷನ್ನಿನ ಮುಖ್ಯಾಧಿಕಾರಿ /ಮುನ್ಸಿಪಾಲಿಟಿಯ ಪ್ರಧಾನ ಕಾರ್ಯದರ್ಶಿ/ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಇವರಲ್ಲಿ ಯಾರಾದರೂ ಸಮಿತಿಯ ಕಾರ್ಯದರ್ಶಿಯಾಗಿರಬೇಕು. 
ಸರ್ಕಾರಿ ಆದೇಶದಂತೆ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳು ಒಳಗೊಂಡಿರಬೇಕು. 
ಗ್ರಾಮ ಪಂಚಾಯತಿಯ ಅಧ್ಯಕ್ಷರು/ಪಟ್ಟಣ ಕಾರ್ಪೋರೇಷನ್ನಿನ ವಾರ್ಡ್ ಸದಸ್ಯರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯ ಪ್ರಾಥಮಿಕ ಸಭೆಯು ನಡೆಯುವುದು. 
ಒಂದು ಶಾಲೆಗಿಂತ ಹೆಚ್ಚಿನ ಶಾಲೆಗಳಲ್ಲಿ ಅಡುಗೆ ಕೇಂದ್ರ ತೆರೆಯಬೇಕಾದ ಸಂದರ್ಭದಲ್ಲಿ ಆಯಾ ಶಾಲಾ ಮುಖ್ಯಸ್ಥರು ಆ ಸಭೆಯ ವಿಶೇಷ ಆಹ್ವಾನಿತರಾಗಿರುವುದು. 
ಈ ಸಭೆಯಲ್ಲಿ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕುರಿತು ಚರ್ಚಿಸುವುದು ಮತ್ತು ಅರ್ಜಿ ಅಹ್ವಾನಿಸುವ ಹಾಗೂ ನೇಮಕಾತಿಯ ದಿನಾಂಕಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು. 
ಅರ್ಜಿಗಳನ್ನು ಆಹ್ವಾನಿಸುವ ಸಂದರ್ಭದಲ್ಲಿ ಸಭಾ ನಡಾವಳಿಯನ್ನು ಅನುಸರಿಸುವುದು. 
ವಿದ್ಯಾರ್ಹತೆ, ಕಾಲಾವಧಿ ಮತ್ತು ಅಡುಗೆ ಸಿಬ್ಬಂದಿಯನ್ನು ನೇಮಕಾತಿ ಮಾಡಲು ನೀಡುವ ಸಂಭಾವನೆ ಕುರಿತಾದ ವಿವರಗಳನ್ನು ಗ್ರಾಮ ಪಂಚಾಯಿತಿಯು ಹತ್ತು ದಿನಗಳಿಗೆ ಮೊದಲೇ ಸೂಚನಾ ಫಲಕದಲ್ಲಿ ಸೂಚಿಸುವುದು. 
ಮುಖ್ಯ ಅಡುಗೆಯವರೂ ಸೇರಿದಂತೆ ಉಳಿದ ಅಡುಗೆಯವರೆಲ್ಲರೂ ಮಹಿಳೆಯರಾಗಿರಬೇಕು. 
ಮುಖ್ಯ ಅಡುಗೆಯವರ ವಿದ್ಯಾರ್ಹತೆ ಕನಿಷ್ಠ ಏಳನೇ ತರಗತಿ ತೇರ್ಗಡೆಯಾಗಿರಬೇಕು. ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯು ಅದೇ ಗ್ರಾಮಕ್ಕೆ ಸೇರಿದವರೆಂದು ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿಗಳಿಂದ ದೃಢೀಕರಿಸುವುದು. 
ಅಡುಗೆ ಸಿಬ್ಬಂದಿ ಸಹಾಯಕರಿಗೆ ವಿದ್ಯಾರ್ಹತೆಯನ್ನು ನಿಗದಿ ಪಡಿಸಿರುವುದಿಲ್ಲ. ಆದರೆ ಅಕ್ಷರಸ್ಥರಿಗೆ ಆದ್ಯತೆ ನೀಡುವುದು. 
ಮುಖ್ಯ ಅಡುಗೆಯವರು/ಅಡುಗೆಯವರನ್ನು ಆರಿಸುವಾಗ 30 ವರ್ಷ ವಯಸ್ಸಿನ ಹಾಗೂ ಅದೇ ಗ್ರಾಮಕ್ಕೆ ಸೇರಿದ ಮಹಿಳೆಯರಿಗೆ ಆದ್ಯತೆ ನೀಡುವುದು. 
ಆಯ್ಕೆಯ ಸಂದರ್ಭದಲ್ಲಿ ವಿಧವೆಯರು ಹಾಗೂ ನೊಂದ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದು. 
ಎ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪ.ಜಾ./ಪ.ಪಂ.ಕ್ಕೆ ಸೇರಿದವರನ್ನೇ ಆಯ್ಕೆ ಮಾಡಬೇಕು. 
ಎ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು ಹಾಗೂ ಮತ್ತೊಬ್ಬರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು. 
ಬಿ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು, ಇನ್ನೊಬ್ಬರು ಹಿಂದುಳಿದ ವರ್ಗಕ್ಕೆ ಹಾಗೂ ಮತ್ತೊಬ್ಬರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿರಬೇಕು. 
ಸಿ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು, ಇನ್ನೊಬ್ಬರು ಹಿಂದುಳಿದ ವರ್ಗಕ್ಕೆ ಮತ್ತು ಮತ್ತೊಬ್ಬರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದು, ನಾಲ್ಕನೆಯವರು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರಬೇಕು. 
ಸರ್ಕಾರಕ್ಕೆ ಹೊರೆಯಾಗದಂತೆ ಆಯಾ ಮುನ್ಸಿಪಾಲಿಟಿ ಹಾಗೂ ಸಿಟಿ ಕಾರ್ಪೋರೇಷನ್ ವ್ಯಾಪ್ತಿಗೆ ಒಳಪಡುವ ಸ್ಥಳೀಯ ದಿನಪತ್ರಿಕೆಗಳಲ್ಲಿ ಸಂಪೂರ್ಣ ವಿವರಗಳನ್ನು ಒಳಗೊಂಡ ಉಚಿತ ಸಾರ್ವಜನಿಕ ಪತ್ರಿಕಾ ಪ್ರಕಟಣೆಯನ್ನು ನೀಡುವುದು. ಪ್ರಕಟಣೆಯು ಭಿತ್ತಿ ಪತ್ರ, ಕರ ಪತ್ರ ಹಾಗೂ ಪ್ಲೇ ಕಾರ್ಡ್ ಗಳ ಮೂಲಕವೇ ಇರಬೇಕು.ಸ್ಥಳೀಯವಾಗಿ ಪ್ರಕಟಿಸುವ ಸಂದರ್ಭದಲ್ಲಿ ಸಂದರ್ಶನ ದಿನಾಂಕವನ್ನು ತಪ್ಪದೇ ತಿಳುಸುವುದು. 
ಸಂದರ್ಶನಕ್ಕೆ ಬರುವ ಅಭ್ಯರ್ಥಿಗೆ ಯಾವುದೇ ಪ್ರಯಾಣ ಭತ್ಯೆಯನ್ನು ನೀಡಲಾಗುವುದಿಲ್ಲ. 
ಸಂದರ್ಶನಕ್ಕೆ ಹಾಜರಾಗುವ ಸಂದರ್ಭದಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ಅಂಕ ಪಟ್ಟಿಯನ್ನು ಜೆರಾಕ್ಸ್ ದ್ವಿಪ್ರತಿಯಲ್ಲಿ, ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರಗಳನ್ನು ತರುವುದು. 
ಆಯ್ಕೆ ಸಮಿತಿಯು ಸಂದರ್ಶನದ ವೇಳೆಯಲ್ಲಿ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿದ ನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು. 
ಸಭೆಯಲ್ಲಿ ತೀರ್ಮಾನಿಸಲಾದ ಸಭಾ ನಡಾವಳಿಗಳನ್ನು ದಾಖಲಿಸುವುದು. ಮೀಸಲಾತಿಯ ಪಟ್ಟಿಯನ್ನು ಸಭಾ ನಡಾವಳಿಯೊಂದಿಗೆ ಲಗತ್ತಿಸುವುದು. ಆದ್ಯತೆಯ ಮೇರೆಗೆ ಅಭ್ಯರ್ಥಿಗಳನ್ನು ನೇಮಕ ಮಾಡುವುದು. ಮುಖ್ಯ ಅಡುಗೆಯವರು ಯಾವುದೇ ವೈಯಕ್ತಿಕ ಕಾರಣಗಳಿಂದ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಆ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಬಹುದು. 
ಮೇಲ್ಕಾಣಿಸಿದ ಎರಡು ಆಯ್ಕೆ ಪಟ್ಟಿಯನ್ನು ಅಂತಿಮ ಅನುಮೋದನೆಗಾಗಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಕಳುಹಿಸತಕ್ಕದ್ದು. 
ಮೇಲ್ಕಾಣಿಸಿದ ಮಾನದಂಡಗಳನ್ನು ಬಳಸಿ, ಪಾರದರ್ಶಕವಾಗಿ ಆಯ್ಕೆ ಮಾಡುವುದು. 
ಮಾರ್ಗಸೂಚಿಯಂತೆ ಆಯ್ಕೆ ಮಾಡದಿದ್ದಲ್ಲಿ, ಯಾವುದೇ ದೂರು ಬಂದಾಗ ಆಯ್ಕೆ ಪಟ್ಟಿಯನ್ನು ನಿರಾಕರಿಸುವ ಅಧಿಕಾರವನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ/ತತ್ಸಮಾನ ಅಧಿಕಾರಿಯವರಿಗೆ ನೀಡಲಾಗಿದೆ. 

ಅಡುಗೆಯವರಿಗೆ ತರಬೇತಿಗಳು
*ಅಡುಗೆಯವರಿಗೆ ಈ ಕೆಳಕಂಡ ಕ್ಷೇತ್ರಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. 
*ವೈಯಕ್ತಿಕ ಸ್ವಚ್ಛತೆ 
*ಎಲ್.ಪಿ.ಜಿ.ಗ್ಯಾಸ್ ಬಳಕೆ 
*ಅಡುಗೆ ಕೋಣೆ ಸ್ವಚ್ಛತೆ 
*ಬೇಳೆ ಮತ್ತು ತರಕಾರಿಗಳ ಬಳಕೆಯಿಂದ ರುಚಿಕರ ಮತ್ತು ಪೌಷ್ಠಿಕ ಆಹಾರ ತಯಾರಿಕೆ. 
*ಸುರಕ್ಷಿತವಾಗಿ ಮಕ್ಕಳಿಗೆ ವಿತರಿಸುವುದು. 

ಹಾಲಿನ ಪುಡಿ ಪರಿಮಾಣ ಮಗುವಿಗೆ ಒಂದು ಬಾರಿಗೆ

ಕ್ರ.ಸಂ.ಪದಾರ್ಥ/ವಿವರಪರಿಮಾಣಮೊತ್ತ(ರೂ.ಗಳಲ್ಲಿ)
1ಹಾಲಿನ ಪುಡಿ18 ಗ್ರಾಂ4.59
2ಸಕ್ಕರೆ10 ಗ್ರಾಂ0.32
3
ಇಂಧನ
-
0.15
4
ಇತರೆ
0.120.12
ಒಟ್ಟು :5.18
ಅಡುಗೆಯವರ ಗೌರವ ಸಂಭಾವನೆ ಮಾಸಿಕ

ರಾಜ್ಯದ ಎಲ್ಲ ಸರಕಾರಿ,ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ಮಧ್ಯಾಹ್ನದ ಬಿಸಿಯೂಟದ ಮಕ್ಕಳ ಸಂಖ್ಯೆಯನ್ನು ಎಸ್. ಎಂ.ಸ್ ಮಾಡಲು ಕ್ರಮವಹಿಸಲು ಆದೇಶಿಸಿದೆ.
#ಮೆಸೇಜ್ ಕಳುಹಿಸಬೇಕಾದ ಟೋಲ್ ಫ್ರೀ ನಂಬರ್ =15544
#ಮುಖ್ಯ ಶಿಕ್ಷಕರು ತಮ್ಮ ರಿಜಿಸ್ಟರ್ ಡ್ ಮೊಬೈಲ್ ಸಂಖ್ಯೆಯಿಂದ ಮಾತ್ರ ಮೆಸೇಜ್ ಮಾಡಬೇಕು. 

#ಮೆಸೇಜ್ ಮಾಡುವ ವಿಧಾನ
KARMDM DD/MM/YYYY,T,S1,S2,S3,S4,S5,S6,S7,S8,S9,S10

*ಮೊದಲು capital lettersನಲ್ಲಿKARMDM ಎಂದು typeಮಾಡಿ space ಕೊಡಿ ನಂತರ

* DD ಎಂಬುದು ದಿನಾಂಕ(2digits)type ಮಾಡಿ /ಹಾಕಿ
MM ಎಂಬುದು ತಿಂಗಳು(2digits)type ಮಾಡಿ/ ಹಾಕಿ
YYYY ಎಂಬುದು ವರ್ಷ(4digits)type ಮಾಡಿ , ಹಾಕಿ
*T ಎಂಬುದು ಆ ದಿನ ಹಾಜರಿರುವ ಶಿಕ್ಷಕರ ಸಂಖ್ಯೆtype ಮಾಡಿ , ಹಾಕಿ
* S1 ಎಂಬುದು ಆ ದಿನ ಹಾಜರಿರುವ ಒಂದನೆಯ ತರಗತಿ ಮಕ್ಕಳ ಸಂಖ್ಯೆ type ಮಾಡಿ , ಹಾಕಿS2 ಎಂಬುದು ಆ ದಿನದ ಎರಡನೇ ತರಗತಿ ಮಕ್ಕಳ ಸಂಖ್ಯೆ type ಮಾಡಿ , ಹಾಕಿ,ಅದೇ ರೀತಿ S3,S4,s5,s6,s7,s8,s9,s10 ಆಯಾ ತರಗತಿ ಮಕ್ಕಳ ಸಂಖ್ಯೆ ಇದನ್ನು type ಮಾಡಿ ನಂತರ ಟೋಲ್ ಫ್ರೀ ಸಂಖ್ಯೆ15544 ಗೆ ಮೆಸೇಜ್ ಮಾಡಿ.


ಉದಾ-1.
LPS(1ರಿಂದ 5)
ದಿನಾಂಕ:14/12/2016
ಹಾಜರಿದ್ದ ಶಿಕ್ಷಕರ ಸಂಖ್ಯೆ=2
ಊಟ ಮಾಡುವ ಮಕ್ಕಳ ಸಂಖ್ಯೆ
1ನೇ ತ=10
2ನೇ ತ=12
3ನೇ ತ=8
4ನೇ ತ=9
5ನೇ ತ=15
KDRMDM 14/12/2016,2,10,12,8,9,15,0,0,0,0,0

ಉದಾ-2
HPS (1ರಿಂದ 7)
ಹಾಜರಿದ್ದ ಶಿಕ್ಷಕರ ಸಂಖ್ಯೆ=8
ಊಟ ಮಾಡುವ ಮಕ್ಕಳ ಸಂಖ್ಯೆ
1ನೇ=30
2ನೇ=35
3ನೇ=38
4ನೇ=32
5ನೇ=30
6ನೇ=34
7ನೇ=36
KDRMDM 14/12/2016,8,30,35,38,32,30,34,36,0,0,0

ಉದಾ-3
HPS(1ರಿಂದ 8)
ಹಾಜರಿದ್ದ ಶಿಕ್ಷಕರ ಸಂಖ್ಯೆ=11
1ನೇ=40
2ನೇ=50
3ನೇ=35
4ನೇ=42
5ನೇ=40
6ನೇ=37
7ನೇ=44
8ನೇ=51
KDRMDM 14/12/2016,11,40,50,35,42,40,37,44,51,0,0
ಉದಾ-4
HS (8ರಿಂದ 10)
ಹಾಜರಿದ್ದ ಶಿಕ್ಷಕರ ಸಂಖ್ಯೆ=8
8ನೇ=46
9ನೇ=52
10ನೇ=48
KDRMDM 14/12/2016,8,0,0,0,0,0,0,0,46,52,48

ಸಂದೇಹಗಳದ್ದಲ್ಲಿ ಸಂಬಂಧಪಟ್ಟ CRP, BRP, ECO ರವರನ್ನು ಸಂಪರ್ಕಿಸಲು ಕೋರಲಾಗಿದೆ
ರೂ. 100.00






  QUESTION PAPERS SA – 2 EXAMINATION ( ONLY FOR MODEL ) CLASS KAN ENG HIN MATH SC/EVS SS PE 1 Click Click   Click Click --- --- Click Click ...